Image

ಸುಸ್ಥಿರದೊಂದಿಗೆ ಸೌಂದರ್ಯ

ಸುಸ್ಥಿರತೆ ಎನ್ನುವುದು ಪರಿಸರದಲ್ಲಿ ಮಾತ್ರವಲ್ಲ, ಸಮಾಜ ಮತ್ತು ಆರ್ಥಿಕತೆಯಲ್ಲೂ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಮತ್ತು ಸಜ್ಜುಗೊಳಿಸುತ್ತೇವೆ ಎಂಬುದಾಗಿದೆ ಎಂದು ನಾವು ಗ್ರೀನ್‌ಲಾಮ್‌ನಲ್ಲಿ ಅರ್ಥಮಾಡಿಕೊಂಡಿದ್ದೇವೆ. ಹವಾಮಾನ ಬದಲಾವಣೆ ವಾಸ್ತವವಾದುದರಿಂದ ನಮ್ಮ ಭೂಮಿಗೆ ಹಾನಿ ಮಾಡಿ ಸುಂದರವಾದ ಸ್ಥಳಗಳನ್ನು ಸೃಷ್ಟಿಸುವುದು ಯಾವತ್ತಿಗೂ ಸಾಧ್ಯವಿಲ್ಲ ಎಂಬುದು ನಮ್ಮ ನಂಬಿಕೆ. ಆದ್ದರಿಂದ ನಾವು ಸುಸ್ಥಿರ ಪ್ರಕ್ರಿಯೆಗಳನ್ನು ಬಳಸಿಕೊಂಡು ಉತ್ತಮ ಉತ್ಪನ್ನಗಳನ್ನು ತಯಾರಿಸುವ ಬದ್ಧತೆಯನ್ನು ಹೊಂದಿದ್ದೇವೆ ಮತ್ತು ಜನರು ಮತ್ತು ಭೂಮಿಯ ಮೇಲೆ ಅವುಗಳ ಪರಿಣಾಮ ಸೌಮ್ಯವಾಗಿರುತ್ತದೆ.

ಪರಿಸರದ ಮೇಲೆ ನಮ್ಮ ಪ್ರಭಾವವನ್ನು ಧನಾತ್ಮಕವಾಗಿರಿಸಲು, ನಾವು ಗ್ರೀನ್ ಸ್ಟಾಟರ್ಜಿ ಗ್ರೂಪ್ ಅನ್ನು ಸ್ಥಾಪಿಸಿದ್ದೇವೆ. ನಮ್ಮ ಸಂಸ್ಥೆಯಾದ್ಯಂತ ಅನೇಕ ಹಸಿರು ಉಪಕ್ರಮಗಳನ್ನು ಅಭಿವೃದ್ಧಿಪಡಿಸುವಲ್ಲಿ, ಅಳವಡಿಸುವಲ್ಲಿ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ಏಕಮನಸ್ಸಿನಿಂದ ಕೆಲಸ ಮಾಡುವುದು ಈ ಗ್ರೂಪ್‌ನ ಕಾರ್ಯವಾಗಿದೆ. ಇದರಿಂದ ನಾವೇನು ಮಾಡಿದರೂ ಕೇವಲ ಇಂಗಾಲದ ಹೆಜ್ಜೆಗುರುಲ್ಲದೇ ಏನೋ ಅರ್ಥಪೂರ್ಣವಾದುದನ್ನು ಉಳಿಸಿಬಿಡುತ್ತೇವೆ.