AFX

ಕ್ರಾಂತಿಕಾರಿ

ಮ್ಯಾಟ್ ಮೇಲ್ಮೈಗಳು

ಶಾಶ್ವತ ಸೌಂದರ್ಯ ವಿಚಾರದಿಂದ ಸ್ಪೂರ್ತಿ ಪಡೆದ ಗ್ರೀನ್‌ಲ್ಯಾಮ್‌, ಎಂದೆಂದಿಗೂ ಕಲೆರಹಿತವಾಗಿ ನೋಡುಗರ ಮನಸೂರೆಗೊಳ್ಳುವ ಮೇಲ್ಮೈಯನ್ನು ವಿನ್ಯಾಸಗೊಳಿಸಿದೆ. ಇಂತಹ ವಿಶಿಷ್ಠ ವಿನ್ಯಾಸದ ಪ್ರತಿಫಲವಾಗಿ ಬಹುತೇಕ ಶೂನ್ಯ ಪ್ರತಿಫಲನ ಅಲ್ಟ್ರಾ ಮ್ಯಾಟ್‌ ಬೆರಳಗುರುತು ಮೂಡದ ಕ್ರಾಂತಿಕಾರಕ ಗ್ರೀನ್‌ಲ್ಯಾಮ್‌ ಎಎಫ್‌ಎಕ್ಸ್‌ ಲ್ಯಾಮಿನೇಟ್‌ಗಳು ಹಾಗೂ ಕಾಂಪ್ಯಾಕ್ಟ್‌ಗಳು ರೂಪುಗೊಂಡಿವೆ. ಹೈಡ್ರೊ, ಅಚ್ಚು ಮತ್ತು ಗೀರು ನಿರೋಧಕತೆಯ ಇದರ ಹೆಚ್ಚುವರಿ ಪ್ರಯೋಜನಗಳನ್ನು ನಿರ್ವಹಣೆಯನ್ನು ಕೂಡಾ ಸುಲಭವಾಗಿಸುತ್ತವೆ. ನಿಮಗೆ ನ್ಯಾಯಸಮ್ಮತವಾಗಿ ದೊರಕಬೇಕಾದುತ್ಕೃಷ್ಟ ಗುಣಮಟ್ಟವನ್ನು ಪೂರೈಸಲು ಗ್ರೀನ್‌ಲ್ಯಾಮ್‌ ಶ್ರಮಿಸುತ್ತದೆ.

ವಾಸಿಸುವ ಸ್ಥಳವನ್ನು ಚೈತನ್ಯಶೀಲವಾಗಿಸಲು ಕಳೆದ ಎರಡು ದಶಕಗಳಿಂದಲೂ ಗ್ರೀನ್‌ಲ್ಯಾಮ್‌ ಮುಂಚೂಣಿಯಲ್ಲಿದೆ. ನಮ್ಮ ಮನಮೋಹಕ ವಿನ್ಯಾಸ, ಸೂಕ್ಷ್ಮ ಕರಕುಶಲತೆ ಹಾಗೂ ನಿಖರತೆಗೆ ಎಂದಿಗೂ ಹಾತೊರೆಯುವ ನಮ್ಮ ಮನೋಭಾವದ ಕಾರಣದಿಂದ ವಿಶ್ವಾದ್ಯಂತ ಗ್ರಾಹಕರಿಗೆ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಲ್ಯಾಮಿನೇಟ್, ಕಾಂಪ್ಯಾಕ್ಟ್, ಅಲಂಕಾರಿಕ ವಿನೀರ್, ಇಂಜಿನೀಯರ್ಡ್‌ ಮರದ ನೆಲಹಾಸು, ಹಾಗೂ ಬಾಗಿಲುಗಳಲ್ಲಿ ಸಾವಿರಾರು ವಿನ್ಯಾಸದ ಅಲಂಕಾರಿಕ ಮತ್ತು ಮೇಲ್ಮೈ ಆಯ್ಕೆಗಳ ಮೂಲಕ ವಿಶ್ವದ ಅಗ್ರಗಣ್ಯ ಮೇಲ್ಮೈ ಉತ್ಪನ್ನವಾಗಿ ಗ್ರೀನ್‌ಲ್ಯಾಮ್‌ ಹೊರಹೊಮ್ಮಿದೆ.

ಗ್ರೀನ್‌ಲ್ಯಾಮ್‌ ಒಂದು ಬ್ರ್ಯಾಂಡ್‌ ಆಗಿ ಜನರು, ಪರಿಸರ ಹಾಗೂ ವಿಶ್ವವನ್ನು ಸುರಕ್ಷಿತವಾಗಿಸಲು ನಮ್ಮ ಪ್ರಕ್ರಿಯೆಗಳಲ್ಲಿ ಮುನ್ನೆಚ್ಚರಿಕೆ, ಬದ್ಧತೆಯನ್ನು ಹೊಂದಿದೆ. ಕಚ್ಚಾ ವಸ್ತುಗಳ ಖರೀದಿಯಿಂದ ಉತ್ಪಾದನೆವರೆಗೆ ಹಾಗೂ ಮರುಬಳಕೆಯಲ್ಲಿಯೂ ಅನೇಕ ಕಠಿಣ ನಿಯಮಗಳನ್ನು ಅನ್ವಯಿಸಿಕೊಂಡಿದೆ.

ವೈಶಿಷ್ಟ್ಯಗಳು

ವ್ಯತ್ಯಾಸವನ್ನು ಮಾಡುವುದು

ಬೆರಳ ಗುರುತು ನಿರೋಧಕ

ಮೇಲ್ಮೈನಲ್ಲಿ ಬೆರಳಿನ ಗುರುತು ಮೂಡುವಿಕೆ ಹಾಗೂ ಅದನ್ನು ಸ್ವಚ್ಛಗೊಳಿಸುವಿಕೆಯಿಂದ ಇನ್ನು ಮುಕ್ತಿ ಸಿಗಲಿದೆ. ಕಲೆರಹಿತ ಮೇಲ್ಮೈಯನ್ನು ವರ್ಷಗಟ್ಟಲೆ ನೋಡುತ್ತ ಅದರ ಸೌಂದರ್ಯವನ್ನು ಸವಿಯುತ್ತಿರಿ.

ಶುಚಿಗೊಳಿಸಲು ಸುಲಭ

ಮೇಲ್ಮೈಯನ್ನು ಶುಚಿಗೊಳಿಸಲು ನೀವಿನ್ನು ಬೆವರುಹರಿಸುವ ಅಗತ್ಯವಿಲ್ಲ. ಒಂದು ಸ್ಪಂಜು ಮತ್ತು ಶುದ್ಧ ನೀರಿದ್ದರೆ ಸಾಗು ಸರಳವಾಗಿ ಸ್ವಚ್ಛಗೊಳಿಸಬಹುದು. (ಯಾವುದೇ ಶುಚಿಕಾರಕ ರಾಸಾಯನಿಕಗಳನ್ನು ಬಳಸುವಂತಿಲ್ಲ)

ಮೃದು ಸ್ಪರ್ಷ

ಮೃದು ಮತ್ತು ನಯವಾದ ಮೇಲ್ಮೈ. ಪ್ರತಿ ಬಾರಿ ನೀವು ಮೇಲ್ಮೈಯನ್ನು ಸ್ಪರ್ಶಿಸಿದಾಗಲೂ ಒಂದು ಹಿತವಾದ ಅನುಭವವನ್ನು ನೀವು ಹೊಂದುತ್ತೀರಿ.

ಹೈಡ್ರೊ ರೆಸಿಸ್ಟೆಂಟ್‌

ನೀರು ಮತ್ತು ಇಬ್ಬನಿಯ ಕಾರಣಕ್ಕೆ ಮೇಲ್ಮೈ ಹಾಳಾಗದಂತೆ ಜಾಗರೂಕತೆಯಿಂದ ವಿನ್ಯಾಸ ಮಾಡಲಾಗಿದ್ದು, ಮೇಲ್ಮೈ ಸೌಂದರ್ಯ ಹಾಳಾಗದಂತೆ ಕಾಪಾಡುವ ನೀರು ಪ್ರತಿರೋಧಕ ಗುಣವನ್ನು ಹೊಂದಿದೆ.

ಆಂಟಿ-ವೈರಸ್ / ಬ್ಯಾಕ್ಟೀರಿಯಾ ವಿರೋಧಿ

ಕೇವಲ ಸುಂದರ ಮೇಲ್ಮೈ ಮಾತ್ರವಲ್ಲದೆ ಇದು ಶೇ.99.99% ವೈರಾಣು ಮತ್ತು ಬ್ಯಾಕ್ಟೀರಿಯಾ ನಿರೋಧಕವೂ ಆಗಿದೆ. ಇದು ನಿಮ್ಮ ಕುಟುಂಬಕ್ಕೆ ಸುರಕ್ಷತೆಯ ಒಂದು ಹೆಚ್ಚುವರಿ ಪದರವನ್ನು ಒದಗಿಸುತ್ತದೆ.

ಆಹಾರ ಸಾಮಗ್ರಿಗೆ ಪೂರಕ

ಮೇಲ್ಮೈನಲ್ಲಿ ಯಾವುದೇ ರೀತಿಯ ಬ್ಯಾಕೀರಿಯಾಗಳು ಬೆಳವಣಿಗೆ ಆಗದಂತೆ ವಿಶೇಷವಾಗಿ ರೂಪಿಸಿರುವ ಹೊರ ಮೇಲ್ಮೈ ಕಾರಣಕ್ಕೆ ಇದು ಅಡುಗೆ ಮನೆಯ ಬಳಕೆಗೆ ಸೂಕ್ತವಾಗಿದೆ.

ಕನಿಷ್ಠ ಬೆಳಕು ಪ್ರತಿಫಲಕದ ಜತೆಗೆ ಅಲ್ಟ್ರಾ ಮ್ಯಾಟ್‌ ಮೇಲ್ಮೈ

ವಿನ್ಯಾಸಗೊಳಿಸಿರುವ ಮೇಲ್ಮೈ ಬಹುತೇಕ ಎಲ್ಲ ರೀತಿಯ ಬೆಳಕಿನ ಪ್ರತಿಫಲನವನ್ನೂ ಇಲ್ಲವಾಗಿಸುತ್ತದೆ, ಕಣ್ಣಿಗೆ ಯಾವುದೇ ಕಿರಿಕಿರಿ ಉಂಟುಮಾಡದ ಮೇಲ್ಮೈಗಳನ್ನು ನೋಡುವುದೇ ಒಂದು ಆರಾಮದಾಯಕ ಅನುಭವ ನೀಡುತ್ತದೆ.

ಗೀರು ನಿರೋಧಕ

ಮೃದು ಸ್ಪರ್ಷ ಮತ್ತು ನಯವಾಗಿರುವ ಮೇಲ್ಮೈಯನ್ನು ಅಷ್ಟೇ ಸದೃಢವಾಗಿ ರೂಪಿಸಲಾಗಿದೆ. ಥರ್ಮಲ್‌ ಹೀಲಿಂಗ್‌ ಗುಣಲಕ್ಷಗಣಗಳೊಂದಿಗೆ ನಿರ್ಮಾಣವಾದ ಮೇಲ್ಮೈ, ಮಾನವರು ಮತ್ತು ಪ್ರಾಣಿಗಳಿಂದ ಉಂಟಾಗುವ ಗೀರುಗಳಿಂದ ರಕ್ಷಣೆ ಒದಗಿಸುತ್ತದೆ.

ವೈ
ಶಿ
ಷ್ಟ್ಯ

ಳು

ವ್ಯತ್ಯಾಸವನ್ನು ಮಾಡುವುದು

ಒಂದು ಮೇಲ್ಮೈ
ಇನ್ನಿಲ್ಲದಂತೆ

ಒಂದು ಮೇಲ್ಮೈ
ಇನ್ನಿಲ್ಲದಂತೆ

AFX ಏಸಸ್ 8 ಕಾರ್ಯಕ್ಷಮತೆ ಪರೀಕ್ಷೆ
ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಪೂರ್ಣ ವೀಡಿಯೊ.

ಗ್ರೀನ್‌ಲಾಮ್ ಅನುಭವ ಕೇಂದ್ರ

25 / ಬಿ, ಮಳಿಗೆ ಸಂಖ್ಯೆ ಇ & amp; ಎಫ್.,
ಮಿರ್ಜಾ ಗಾಲಿಬ್ ರಸ್ತೆ, ಪಾರ್ಕ್ ಸ್ಟ್ರೀಟ್. ವೆಸ್ಟ್ಸೈಡ್ ಮಾಲ್ ಎದುರು,
ಕೋಲ್ಕತಾ – 700016, ಭಾರತ

ನಮ್ಮನ್ನು ಸಂಪರ್ಕಿಸಿ

+91 62921 26662

experiencecenter.kolkata@greenlam.com

ನಮ್ಮನ್ನು ಅನುಸರಿಸಿ

ಕೃತಿಸ್ವಾಮ್ಯ 2022 ಗ್ರೀನ್‌ಲಾಮ್ ಇಂಡಸ್ಟ್ರೀಸ್ ಲಿಮಿಟೆಡ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ನಿಯಮ ಮತ್ತು ಶರತ್ತುಗಳು

ಗೌಪ್ಯತಾ ನೀತಿ